== ಜೀವನ == ಬೆಳಗೆರೆ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗದವರು. ಅಲ್ಲಿಯೇ (ಬೆಳೆಗೆರೆ) ಅವೆರು ದಿನಾಂಕ ೨೨-೫-೧೯೧೬ ರಂದು ಜನಿಸಿದರು' (ಜನನ [22-5-1916]). ನಿಧನ ೨೨.೦೩.೨೦೧೩. ತಂದೆ ಆಶುಕವಿಗಳಾಗಿದ್ದ ಚಂದ್ರಶೇಖರ ಶಾಸ್ತ್ರಿಗಳು. ತಾಯಿ ಮೋಕ್ಷಗುಂಡಂ ಅನ್ನಪೂರ್ಣಮ್ಮ. ಮೊದಲು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಅಧ್ಯಾಪಕ ವೃತ್ತ್ತಿಯನ್ನು ಪ್ರಾರಂಭಿಸಿದರು. ಒಂದೇ ದಿನ ಇಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಕಳೆದುಕೊಂಡು ಹಿಮಾಲಯದತ್ತ ಪ್ರಯಾಣ ಬೆಳೆಸಿದರು. ಈ ಸುತ್ತಾಟದಲ್ಲಿಯೇ ಮಹಾತ್ಮ ಗಾಂಧಿ ಯವರ ಭೇಟಿಯಾಯಿತು. ಬಿಡುವಿದ್ದಾಗ ಭಜನೆ, ಜೈಮಿನಿ ಭಾರತ ವಾಚನ ಮಾಡುತ್ತಿದ್ದರು. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ , ಡಿ ವಿ ಜಿ, ಎಂ.ಆರ್.ಶ್ರೀ ಮುಂತಾದವರನ್ನು ಕರೆಸಿ, ಜನರಿಗೆ ಆಧ್ಯಾತ್ಮದ ಪರಿಚಯವನ್ನು ಮಾಡಿಸುತ್ತಿದ್ದರು. ಬೆಳಗೆರೆ ಕೃಷ್ಣಶಾಸ್ತ್ರಿ ಯವರು ದಿ.23-3-2013ರಲ್ಲಿ ನಿಧನಹೊಂದಿದ್ದಾರೆ == ಕೃತಿಗಳು == ತುಂಬಿ (ಕವನ ಸಂಕಲನ) ಸಾಹಿತಿಗಳ ಸ್ಮೃತಿ ' ಮರೆಯಲಾದೀತೇ? ( ಸಾಹಿತ್ಯಲೋಕದ ದಿಗ್ಗಜರ ಒಡನಾಟದ ನೆನಪುಗಳು) ಯೋಗ್ದಾಗೆಲ್ಲ ಐತೆ (ಐದು ಮುದ್ರಣ,ನಾಲ್ಕು ಭಾಷೆಗಳಿಗೆ ಅನುವಾದ) ಹಳ್ಳಿಚಿತ್ರ (ನಾಟಕ) ಹಳ್ಳಿ ಮೇಷ್ಟ್ರು(ನಾಟಕ) ಆಕಸ್ಮಿಕ (ನಾಟಕ) == ಪ್ರಶಸ್ತಿಗಳು == ರಾಜ್ಯ ಮತ್ತು ಕೇಂದ್ರದ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ ಹಳ್ಳಿ ಚಿತ್ರ ನಾಟಕಕ್ಕೆ ಕೇಂದ್ರ ನಾಟಕ ಆಕಾಡೆಮಿ ಪ್ರಶಸ್ತಿ ಅಳಸಿಂಗಾಚಾರ್ ಪ್ರಶಸ್ತಿ ಆಕಾಶವಾಣಿ ಪುರಸ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ == ಉಲ್ಲೇಖಗಳು ==